ಕನ್ನಡ ಕೋಗಿಲೆ : ಮುಳಿಯ ತಿಮ್ಮಪ್ಪಯ್ಯನವರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. 1916ರ ಏಪ್ರಿಲ್ನಲ್ಲಿ ಪ್ರಾರಂಭವಾಗಿ, ನಾಲ್ಕೂವರೆ ವರ್ಷ ನಡೆಯಿತು. ಮಂಗಳೂರಿನ ಶಾರದಾ ಮುದ್ರಣಾಲಯದಲ್ಲಿ ಮುದ್ರಿತವಾಗುತ್ತಿದ್ದ ಈ ಪತ್ರಿಕೆ ಧರ್ಮ, ಅರ್ಥ, ಸಮಾಜ ಮತ್ತು ಸಾಹಿತ್ಯ ವಿಷಯಗಳಿಗೆ ಸಂಬಂದಿsಸಿದ ಪ್ರೌಢ ಲೇಖನ ಗಳನ್ನು ಪ್ರಕಟಿಸುತ್ತಿತ್ತು. ಪ್ರಸಿದ್ಧ ಕವಿಗಳ ಕವನಗಳು ಈ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಖ್ಯಾತ ಲೇಖಕರಾಗಿದ್ದ ಪಿ.ಭೋಜರಾವ್ ಸಂಪಾದಕ ವರ್ಗದಲ್ಲಿದ್ದರು. ಉಗ್ರಾಣ ಮಂಗೇಶರಾವ್, ಮುಳಿಯ ಶಂಕರಭಟ್ಟ ಮೊದಲಾದವರು ಲೇಖಕ ವರ್ಗದಲ್ಲಿದ್ದರು. ಕನ್ನಡ ಕೋಗಿಲೆ ಸದ್ವಿಷಯದ ಪತ್ರಿಕೆಯೆಂದು ಹೆಸರು ಪಡೆದಿತ್ತು.	(ಎಸ್.ವಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ